ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು:-


1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? 
🌸 ಟಿಪ್ಪು ಸುಲ್ತಾನ್

2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? 
🌸 ಜಯಚಾಮರಾಜೇಂದ್ರ ಒಡೆಯರ್

3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? 
🌸 24

4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? 
🌸 ಕ್ರೀಶ 600

5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ? 
🌸 ವಿಜಯನಗರ ಸಾಮ್ರಾಜ್ಯ
( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ)

6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ? 
🌸 ಕ್ರೀಶ 1336

7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು? 
🌸 ವಿದ್ಯಾರಣ್ಯಗುರುಗಳು

8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು? 
🌸 ಅಳಿಯ ರಾಮರಾಯ

9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು? 
🌸 ತಾಳಿಕೋಟಿ ಯುದ್ಧ

10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು? 
🌸 ಒಂದನೇ ಕೃಷ್ಣ

11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ? 
🌸 1640

12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು? 
🌸 ತುಳು ಮನೆತನ

13) ಮೈಸೂರು ಅರಸರ ಮೂಲಪುರುಷ ಯಾರು? 
🌸 ಯದುರಾಯ

14) ಶಿವಾಜಿಯನ್ನು ಶ್ರೀರಂಗಪಟ್ಟಣದ ಯುದ್ಧದಲ್ಲಿ ಸೋಲಿಸಿದ ಮೈಸೂರು ಅರಸ ಯಾರು?
🌸 ಚಿಕ್ಕದೇವರಾಜ ಒಡೆಯರ 

15) ನವಕೋಟಿ ನಾರಾಯಣ ಎಂಬ ಬಿರುದ್ಧ ಯಾವ ಅರಸನಿಗೆ ಇತ್ತು? 
🌸 ಚಿಕ್ಕದೇವರಾಜ ಒಡೆಯರು ( ಕಾರಣ " ಅವನ ಖಜಾನೆಯಲ್ಲಿ 9 ಕೋಟಿ ಹಣ ಇದ್ದ ಕಾರಣ)

16) ಗಂಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು? 
 🌸 ದಡಿಗ

17) ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದು? 
🌸 ಗರುಡ

18) ಕನ್ನಡದ ಅತ್ಯಂತ ಹಳೆಯ ಶಾಸನ ಯಾವುದು? 
🌸 ಹಲ್ಮಿಡಿ ಶಾಸನ

19) ಕನ್ನಡದ ಮೊದಲ ದೊರೆ ಯಾರು? 
🌸 ಮಯೂರವರ್ಮ

20) ನಾಟ್ಯಾ ರಾಣಿ ಎಂಬ ಬಿರುದಿನಿಂದ ಯಾರನ್ನು ಕರೆಯುತ್ತಿದ್ದರು? 
🌸 ಶಕುಂತಲಾ ದೇವಿ

21) ಮಂಡ್ಯದಲ್ಲಿನ ಸಕ್ಕರೆ ಕಾರ್ಖಾನೆಯು ಯಾರ ಕಾಲದಲ್ಲಿ ಸ್ಥಾಪನೆಯಾಯಿತು? 
🌸 ಸರ್ ಮಿರ್ಜಾ ಇಸ್ಮಾಯಿಲ್

22) ಯಾರನ್ನು ಕನ್ನಡದ ಕಾಳಿದಾಸ ಎಂದು ಕರೆಯುತ್ತಾರೆ? 
🌸 ಬಸಪ್ಪ ಶಾಸ್ತ್ರಿ

23) ಮೈಸೂರನ್ನು ಕರ್ನಾಟಕವೆಂದು ನಾಮಕರಣ ಮಾಡಿದಾಗ ಇದ್ದಾರ ಯಾರು? 
🌸 ದೇವರಾಜ್ ಅರಸು (1973)

24) ಕರ್ನಾಟಕ ಸಭಾ ವನ್ನು ಯಾರು ಸ್ಥಾಪಿಸಿದರು? 
🌸 ಆಲೂರು ವೆಂಕಟರಾಯ

25) ಅಂಕೋಲದಲ್ಲಿ ಯಾರ ನೇತೃತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಾರಂಭವಾಯಿತು? 
🌸 ಎಂ.ಪಿ ನಾಡಕರ್ಣಿ

26) ಕರ್ನಾಟಕ ಗತವೈಭವ ಎಂಬ ಗ್ರಂಥವನ್ನು ರಚಿಸಿದವರು ಯಾರು? 
🌸 ಆಲೂರು ವೆಂಕಟರಾಯ

27) ಕರ್ನಾಟಕ ಜಲಿಯನ್ ವಾಲಾಬಾಗ್ ಎಂದು ಯಾವ ನಗರವನ್ನು ಕರೆಯುತ್ತಾರೆ? 
🌸 ವಿದುರಾಶ್ವತ

28) ಈಸೂರು ಪ್ರಕಾರವು ಯಾವ ಚಳುವಳಿ ಕಾಲದಲ್ಲಿ ನಡೆಯಿತು? 
🌸 ಭಾರತ ಬಿಟ್ಟು ತೊಲಗಿ ಚಳುವಳಿಯ ಕಾಲದಲ್ಲಿ

29) ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಎಂಬ ಗೀತೆಯನ್ನು ಬರೆದವರು ಯಾರು? 
🌸 ಹುಯಿಗೊಳ್ ನಾರಾಯಣರಾವ್

30) ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿಕೊಂಡವರು ಯಾರು? 
🌸 ಮಹಾತ್ಮ ಗಾಂಧೀಜಿ 1924

31) ಹಿಂದುಸ್ತಾನಿ ಸೇವಾದಳ ವನ್ನು ಸ್ಥಾಪಿಸಿದವರು ಯಾರು? 
🌸 ಎನ್ ಎಸ್ ಹರ್ಡೇಕರ್

32) ಕರ್ನಾಟಕದ ಸಿಂಹ ಎಂದು ಜನಪ್ರಿಯರಾದವರು ಯಾರು? 
🌸 ಗಂಗಾಧರ ದೇಶಪಾಂಡೆ

33) ಮ್ಯಾಜಿನಿ ಕ್ಲಬ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದವರು ಯಾರು? 
🌸 ಹನುಮಂತರಾಯ ದೇಶಪಾಂಡೆ

34) ಸುರಪುರ ವೆಂಕಟಪ್ಪ ನಾಯಕ ಯಾವ ದಂಗೆಯಿಂದ ಪ್ರಭಾವಗೊಂಡರು? 
🌸 1857 ಸಿಪಾಯಿ ದಂಗೆ

35) ಯಾವ ಕಾಯ್ದೆಯ ವಿರುದ್ಧ ಹಲಗಲಿಯ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದರು? 
🌸 ಶಶಸ್ತ್ರ ಕಾಯ್ದೆ

36) ಬ್ರಿಟಿಷರು ಕೊಡಗನ್ನು ಯಾವಾಗ ವಶಪಡಿಸಿಕೊಂಡರು? 
🌸 1834

37) ನಗರ ದಂಗೆಯ ನೇತೃತ್ವ ವಹಿಸಿಕೊಂಡರು ಯಾರು? 
🌸 ಬೂದಿ ಬಸಪ್ಪ 1831

38) ಕಿತ್ತೂರಿನ ದಂಗೆ ಯಾವಾಗ ಪ್ರಾರಂಭವಾಯಿತು? 
🌸 1824

39) ಬೃಂದಾವನ ಉದ್ಯಾನವನ್ನು ಯಾರು ನಿರ್ಮಿಸಿದರು? 
🌸 ಸರ್ ಮಿರ್ಜಾ ಇಸ್ಮಾಯಿಲ್

40) ಆಧುನಿಕ ಮೈಸೂರು ನಿರ್ಮಾಪಕ ಎಂದು ಯಾರನ್ನು ಕರೆಯುತ್ತಾರೆ? 
🌸 ಸರ್ ಎಂ ವಿಶ್ವೇಶ್ವರಯ್ಯ

41) ಮೈಸೂರು ವಿಶ್ವವಿದ್ಯಾಲಯ ಯಾವಾಗ ಪ್ರಾರಂಭವಾಯಿತು? 
🌸 1916

42) ಯಾರನ್ನು ರಾಜ್ಯ ಋಷಿ ಎಂದು ಕರೆಯುತ್ತಾರೆ?
🌸 ನಾಲ್ವಡಿ ಕೃಷ್ಣರಾಜ ಒಡೆಯರು 

43) ಯಾವ ದಿವಾನರ ಕಾಲದಲ್ಲಿ ಮೈಸೂರು ಸಿವಿಲ್ ಪರೀಕ್ಷೆ ಪ್ರಾರಂಭವಾಯಿತು? 
🌸 ಶೇಷಾದ್ರಿ ಅಯ್ಯರ್

44) ಯಾವಾಗ ಮೈಸೂರನ್ನು ಬ್ರಿಟಿಷರು ವಶಪಡಿಸಿಕೊಂಡರು? 
🌸 1831ರ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ

45) ಯಾವ ಒಪ್ಪಂದ ಪ್ರಕಾರವಾಗಿ ಟಿಪ್ಪು ತನ್ನ ಮಕ್ಕಳನ್ನು ಒತ್ತೆಯಾಳಾಗಿ ಇಡಲಾಯಿತು? 
🌸 ಶ್ರೀರಂಗಪಟ್ಟಣ ಒಪ್ಪಂದ ಪ್ರಕಾರ

46) ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷರ ಸೇನಾಧಿಕಾರಿ ಯಾರು?
🌸 ಲಾರ್ಡ್ ಕಾರ್ನವಾಲಿಸ್

47) ಎರಡನೇ ಮೈಸೂರ್ ಇದು ಯಾವ ಒಪ್ಪಂದದಿಂದ ಮುಕ್ತಾಯವಾಯಿತು? 
🌸 ಮಂಗಳೂರು ಒಪ್ಪಂದ

48) ಹೈದರಾಲಿಯು ಯಾವ ಯುದ್ಧದಲ್ಲಿ ಮರಣಹೊಂದಿದನು? 
🌸 ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ

49) ಮೊದಲನೇ ಆಂಗ್ಲೋ ಮೈಸೂರ್ ಯುದ್ಧ ಯಾವ ಒಪ್ಪಂದದಿಂದ ಮುಕ್ತಾಯವಾಯಿತು? 
🌸 ಮದ್ರಾಸ್ ಒಪ್ಪಂದ

50) ಹದಿಬದೆಯ ಧರ್ಮದ ಕರ್ತೃ ಯಾರು? 
🌸 ಸಂಚಿಹೊನ್ನಮ್ಮ

51) ಸಂಚಿ ಹೊನ್ನಮ್ಮಳ ಯಾರ ಆಸ್ಥಾನದಲ್ಲಿದ್ದರು? 
🌸 ಚಿಕ್ಕದೇವರಾಜ ಒಡೆಯರು

52) ಕನ್ನಡದ ಮೊದಲ ನಾಟಕ? 
🌸 ಮಿತ್ರವಿಂದ ಗೋವಿಂದ

53) ಎರಡನೇ ಇಬ್ರಾಹಿಮ್ ಆದಿಲ್ ಶಾನ ರಚಿಸಿದ ಕೃತಿ? 
🌸 ಕಿತಾಬ್ ಇ ನವರಸ್

54) ಮಹಮ್ಮದ್ ಗವಾನನ ಮರಣಕ್ಕೆ ಗುರಿಮಾಡಿದ ದೊರೆ ಯಾರು? 
🌸 ಮೂರನೇ ಮಹಮ್ಮದ್ ಷಾ

55) ಡೋಮಿಂಗೋ ಪಯಾಸ್ ಯಾರ ಕಾಲದಲ್ಲಿ ವಿಜಯನಗರ'ಕ್ಕೆ ಭೇಟಿಕೊಟ್ಟನು? 
🌸 ಕೃಷ್ಣದೇವರಾಯ

56) ವಿಜಯನಗರ ಕಾಲದಲ್ಲಿ ವರ್ಣ ಚಿತ್ರಕಲೆಯ ಪ್ರಮುಖ ಕೇಂದ್ರ? 
🌸 ಲೇಪಾಕ್ಷಿ

57) ವಿಜಯನಗರ ಸಾಮ್ರಾಜ್ಯದ ಹಡಗು ನಿರ್ಮಾಣ ಕೇಂದ್ರ ಯಾವುದು?
🌸 ಕ್ಯಾಲಿಕಟ್ 

58) ಗಂಗಾದೇವಿ ರಚಿಸಿದ ಕೃತಿ ಯಾವುದು? 
🌸 ಮಧುರಾವಿಜಯಂ

59) ಕುಮಾರವ್ಯಾಸನೂ ರಚಿಸಿದ ಕೃತಿ? 
🌸 ಕರ್ನಾಟಕದ ಕಥಾಮಂಜರಿ

60) ಅಲ್ಲಸನಿ ಪೆದ್ದನ ರಚಿಸಿದ ಕೃತಿ? 
🌸 ಮನುಚರಿತಂ

61) ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪರ್ಷಿಯಾದ ರಾಯಬಾರಿ? 
🌸 ಅಬ್ದುಲ್ ರಜಾಕ್

62) ಶಂಕರಾಚಾರ್ಯರು ಉತ್ತರದಲ್ಲಿ ಸ್ಥಾಪಿಸಿದ ಮಠ ಯಾವುದು? 
🌸 ಜ್ಯೋತಿರ್ ಮಠ

63) ಮಧ್ವಾಚಾರ್ಯರು ಎಲ್ಲಿಂದ ಕೃಷ್ಣನ ವಿಗ್ರಹವನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು? 
 🌸 ದ್ವಾರಕಾ ಯಿಂದ

64) ರಾಮಾನುಚಾರ್ಯರು ಯಾವ ಮಠದ ಮಠಾಧಿಪತಿ ಯಾಗಿದ್ದರು? 
🌸 ಶ್ರೀರಂಗಂ

65) ಶಂಕರಾಚಾರ್ಯರು ಕರ್ನಾಟಕದಲ್ಲಿ ಎಲ್ಲಿ ಮಠವನ್ನು ಸ್ಥಾಪಿಸಿದರು? 
🌸 ಶೃಂಗೇರಿ

66) ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಥಮ ಮನೆತನ ಯಾವುದು? 
🌸 ಸಂಗಮ ಮನೆತನ

67) ಬೇಲೂರಿನ ಚನ್ನಕೇಶವ ದೇವಾಲಯವನ್ನು ನಿರ್ಮಾಣ ಮಾಡಿದವರು ಯಾರು?
🌸 ವಿಷ್ಣುವರ್ಧನ 

68) ವಿಷ್ಣುವರ್ಧನನ ಆಶ್ರಯ ಪಡೆದ ವೈಷ್ಣವ ಗುರು ಯಾರು? 
🌸 ರಾಮಾನುಜಚಾರ್ಯ

69) ಬಸವೇಶ್ವರರು ಯಾವ ರಾಜನ ಪ್ರಧಾನ ಮಂತ್ರಿ ಆಗಿದ್ದರು? 
🌸 ಎರಡನೇ ಬಿಜ್ಜಳನ ಅರಸನಲ್ಲಿ

70) ಯಾವ ದೊರೆಯನ್ನು ಸರ್ವಜ್ಞ ಚಕ್ರವರ್ತಿ ಎಂದು ಕರೆಯುತ್ತಾರೆ? 
🌸 ಮೂರನೇ ಸೋಮೇಶ್ವರ





Comments

Post a Comment

Popular posts from this blog

Most Important Repeat One' Word Questions Answer.........✅

INDIAN NAVY, BSF ಸೇರಿ ರಕ್ಷಣಾ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.