ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು.
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿರುವ ಕರ್ನಾಟಕ ಇತಿಹಾಸಕ್ಕೆ ಸಂಬಂಧಪಟ್ಟ ಪ್ರಶ್ನೋತ್ತರಗಳು:- 1) ದಿವಾನ್ ಪೂರ್ಣಯ್ಯನವರು ಯಾರ ಬಳಿ ದಿವಾನರಾಗಿದ್ದರು? 🌸 ಟಿಪ್ಪು ಸುಲ್ತಾನ್ 2) ಮೈಸೂರು ಸಂಸ್ಥಾನದ ಕೊನೆಯ ಅರಸ ಯಾರು? 🌸 ಜಯಚಾಮರಾಜೇಂದ್ರ ಒಡೆಯರ್ 3) ಮೈಸೂರು ಸಂಸ್ಥಾನವನ್ನು ಆಳಿದ ರಾಜರು ಎಷ್ಟು ಮಂದಿ? 🌸 24 4) ಚಾಲುಕ್ಯರ ದೊರೆಯಾದ ಹಿಮ್ಮಡಿ ಪುಲಿಕೇಶಿ ಸಿಂಹಾಸನವೇರಿದ ಕಾಲ? 🌸 ಕ್ರೀಶ 600 5) ಮರೆಯಲಾಗದ ಸಾಮ್ರಾಜ್ಯ ಎಂದು ಹೆಸರು ಮಾಡಿದ ಸಾಮ್ರಾಜ್ಯ? 🌸 ವಿಜಯನಗರ ಸಾಮ್ರಾಜ್ಯ ( ಗಾಂಧೀಜಿ ಅವರು ರಾಮರಾಜ್ಯ ಎಂದು ಕರೆದಿದ್ದಾರೆ) 6) ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಯಾದ ವರ್ಷ? 🌸 ಕ್ರೀಶ 1336 7) ವಿಜಯನಗರ ಸಾಮ್ರಾಜ್ಯ ಕಟ್ಟಲು ಮಾರ್ಗದರ್ಶಕರಾಗಿದ್ದ ಗುರುಗಳು? 🌸 ವಿದ್ಯಾರಣ್ಯಗುರುಗಳು 8) ವಿಜಯನಗರ ಸಾಮ್ರಾಜ್ಯದ ಅಂತ್ಯ ಯಾರ ಕಾಲದಲ್ಲಾಯಿತು? 🌸 ಅಳಿಯ ರಾಮರಾಯ 9) ವಿಜಯನಗರ ಸಾಮ್ರಾಜ್ಯದ ಅಂತ್ಯ ಹಾಡಿದ ಯುದ್ಧ ಯಾವುದು? 🌸 ತಾಳಿಕೋಟಿ ಯುದ್ಧ 10) ಎಲ್ಲೋರದ ಜಗತ್ಪ್ರಸಿದ್ದ ಕೈಲಾಸನಾಥ ದೇವಾಲಯವನ್ನು ಅಖಂಡತೆಯಲ್ಲಿ ಕೊರೆಸಿದ ಕನ್ನಡ ದೊರೆ ಯಾರು? 🌸 ಒಂದನೇ ಕೃಷ್ಣ 11) ಮೈಸೂರು ರಾಜ್ಯದಲ್ಲಿ ನಾಣ್ಯ ಮುದ್ರಣ ಪ್ರಾರಂಭವಾದದ್ದು ಯಾವಾಗ? 🌸 1640 12) ಕೃಷ್ಣದೇವರಾಯನು ಯಾವ ಮನೆತನಕ್ಕೆ ಸೇರಿದವನು? 🌸 ತುಳು ಮನೆತನ 13) ಮೈಸೂರು ಅರಸರ ಮೂಲಪುರುಷ ಯಾರು? 🌸 ಯದುರಾಯ 14) ಶಿವಾಜಿಯನ್ನು ಶ್ರೀರಂಗಪಟ್ಟಣ...